31/01/2025
After long time... ಚಿತ್ರ ತಂಡ ಹಾಗೂ ನಮ್ಮ ಸಹಕಲಾವಿದರ ಜೊತೆ ಸೇರಿ suspense and trailer ಆಗಿರುವ ಮೂವಿ ನೋಡಿರೋದು ತುಂಬಾ ಖುಷಿಯಾಯಿತು..
ಪ್ರಸ್ತುತ ದಿನದಲ್ಲಿ ಒಂದು ಚಿತ್ರ ಗೆಲ್ಲಲು ಕಲಾವಿದರ ನಟನೆಯ ಜೊತೆಗೆ ಕಥೆಯ ಆಯ್ಕೆ, ಮೇಕಿಂಗ್, ಸ್ಕ್ರೀನ್ ಫ್ಲೈ, ಡೈಲಾಗ್ಸ್ ಹಾಗೂ ಸಸ್ಪೆನ್ಸ್ ಜೊತೆಗೆ ಪ್ರೇಕ್ಷಕರನ್ನು ಹಿಡಿದಿಡುವುದು ಅಷ್ಟೇ ಮುಖ್ಯವಾಗಿರುತ್ತದೆ.
ಇದೇನಪ್ಪ ಇಷ್ಟೊಂದು ಬಿಲ್ಡ್ ಅಪ್ ಕ್ರಿಯೇಟ್ ಮಾಡ್ತಿದ್ದಾಳೆ. ಇದ್ಯಾವ ಮೂವಿ ಅಂತ ಯೋಚನೆ ಮಾಡ್ತಿದ್ದಾರೆ¿🤔?¿🤔? ಹಾಗಿದ್ರೆ ಮುಂದೆ ಓದಿ...
ಪ್ರಕೃತಿಯಲ್ಲಿ ನಡೆಯುವ ಅದೆಷ್ಟೋ ವಿಸ್ಮಯಗಳು ವಿಜ್ಞಾನಕ್ಕೂ ತಿಳಿಯುವುದಿಲ್ಲ. ಅಂತಹುದೇ ಒಂದು ಚಿತ್ರ ಸಮರ್ಥ್ ಮಂಜುನಾಥ್ ಅವರ ನಿರ್ದೇಶನದಲ್ಲಿ ಮೂಡಿಬಂದ "ಕಾಡುಮಳೆ" ಚಿತ್ರ ಇಂದು ( ಜ.31) ಬಿಡುಗಡೆಯಾಗಿ ಅದ್ಭುತ ಪ್ರದರ್ಶನ ಕಾಣ್ತಿದೆ..
ಈ ಚಿತ್ರ ಒಂದು ರೀತಿ ಬ್ರೈನ್ ಸ್ಕಾಮ್ ಎಂದ್ರೆ ತಪ್ಪಾಗಲಾರದು. ಚಿತ್ರದಲ್ಲಿ ಕಾಡುವ ದಟ್ಟ ಅಭಯಾರಣ್ಯವೇ ಒಂದು ವಿಸ್ಮಯಗಳ ಗಂಟು... ಇಲ್ಲಿ ಕಣ್ಣಿಗೆ ಕಾಣೋದೆಲ್ಲ ಸತ್ಯ ಅಲ್ಲ.. ಹಾಗಂತ ಸುಳ್ಳು ಅಂತ ಅಲ್ಲ... It's only mind game.. Other ways nothing.. ನಾವು ನಮ್ಮವರ ಜೊತೆಗೆ ಹೇಗೆ ನಡೆದು ಕೊಳ್ಳುತ್ತೆವೋ ಅದೇ ನಮಗೆ ಸಿಗುತ್ತದೆ. Just like a mirror... Simply it's called "Karma Returns".
ಈವಾಗ ಇದ್ಯಾಕೆ ಹೇಳ್ದೆ ಅಂದ್ರೆ, ಈ ಚಿತ್ರದಲ್ಲಿ ನಟಿ ಸಂಗೀತಾ ರಾಜರಾಮ್ ಅವರು ಹೇಗೆ ವಿಚಾರ ಮಾಡುತ್ತಾಳೋ ಅದನ್ನೇ ಅವಳು ನೋಡುತ್ತಾಳೆ.. ಅನುಭವಿಸುತ್ತಾಳೆ... ಇನ್ನೂ ನಟ ಅರ್ಥ್ ಹರ್ಷನ್ ಎಂಟ್ರಿ ಆದ್ಮಿಲೇ ಕಥೆ ಮತ್ತಷ್ಟು ವಿಸ್ತಾರವಾಗಿ ತೆರೆದುಕೊಳ್ಳುತ್ತದೆ..
ಪ್ರಕೃತಿಯಲ್ಲಿರೋದು ಏಳೇ ಅದ್ಭುತಗಳು..
ಪ್ರಪಂಚದಲ್ಲಿರೋದು ಏಳೇ ಖಂಡಗಳು, ಏಳೇ ಸಮುದ್ರಗಳು
ಸಂಗೀತದಲ್ಲಿರೋದು ಏಳೇ ಸ್ವರಗಳು.. ಅದೇ ರೀತಿ ಕಾಡುಮಳೆ ಎಂಬ ಅಭಯಾರಣ್ಯದಲ್ಲಿ ಒಂದೇ ಘಟನೆ ಏಳು ಬಾರಿ ಘಟಿಸುವುದರಿಂದ ಪ್ರೇಕ್ಷಕರನ್ನು ಆಶ್ಚರ್ಯ, ಕುತೂಹಲ, ಆತಂಕ, ಭಯ ಜೊತೆಗೆ ಕಂಡು ಕೇಳರಿಯದಂತಹ ವಿಸ್ಮಯಗಳೊಂದಿಗೆ ಭ್ರಮಾಲೋಕದಲ್ಲಿ ತೆಲುವಂತೆ ಮಾಡುತ್ತದೆ...
ಚಿತ್ರ ನೋಡಿನ ನಮಗೆ ಭ್ರಮೆಯಿಂದ ಹೊರಬರಲು ಕೆಲ ಸಮಯಗಳೇ ಬೇಕಾಯಿತು... ಹಾಗಂತ ನೀವು "ಕಾಡುಮಳೆ"ಯ ಅದ್ಭುತಗಳನ್ನು ಅನುಭವಿಸದೆ ಇರಬೇಡಿ... ನೀವು "ಕಾಡುಮಳೆ" ಅರಣ್ಯದ ಅದ್ಭುತ ವಿಸ್ಮಯಗಳನ್ನು ನೀವು ನಿವಾಗದೇ ಕಥೆ ಪಾತ್ರಧಾರಿಯಾಗಿ ಅನುಭವಿಸಿ...
ಧನ್ಯವಾದಗಳು 🙏🙏🙏
"ಕಾಡುಮಳೆ"-2 COMING SOON